Job Description: * ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. * ರಾಜ್ಯ ಸರ್ಕಾರವು ಪ್ರಸ್ತುತ ಬಳ್ಳಾರಿ ಜಿಲ್ಲೆಯನ್ನು ವಿಂಗಡಿಸಿ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದೆ ಎಂದು ತಿಳಿಸಿದೆ. * ಪ್ರಸ್ತುತ ಹೊಸದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಯು ಆರು ತಾಲೂಕುಗಳನ್ನೂ ಒಳಗೊಂಡಿದೆ. * ಪ್ರಸ್ತುತ ವಿಜಯನಗರ ಜಿಲ್ಲೆಗೆ ಜಿಲ್ಲಾಕೇಂದ್ರವಾಗಿ ಹೊಸಪೇಟೆಯನ್ನು ಆಯ್ಕೆ ಮಾಡಲಾಗಿದೆ. 6 ತಾಲೂಕುಗಳು ಇಂತಿವೆ: * ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಮತ್ತು ಹರಪನಹಳ್ಳಿ ಈ 6ತಾಲೂಕುಗಳು ವಿಜಯನಗರ ಜಿಲ್ಲೆಯು ಆಡಳಿತದಲ್ಲಿ ಬರಲಿವೆ. * ಈ ವಿಜಯನಗರ ಜಿಲ್ಲೆಯು ಹೈದರಾಬಾದ್-ಕರ್ನಾಟಕ ಪ್ರದೇಶದ ಈಶಾನ್ಯ ಭಾಗದಲ್ಲಿದೆ. ಈ ಜಿಲ್ಲೆಯನ್ನು 2020ರಲ್ಲಿ ಬಳ್ಳಾರಿ ಜಿಲ್ಲೆಯಿಂದ ಬೇರ್ಪಡಿಸಲಾಗಿದೆ, ಪ್ರಸ್ತುತ ಇದು ರಾಜ್ಯದ 31 ನೇ ಜಿಲ್ಲೆಯಾಗಿದೆ. * ವಿಜಯನಗರ ಜಿಲ್ಲೆ ಸ್ಥಾಪನೆ ದಿನಾಂಕ: 18 ನವೆಂಬರ್ 2020