Job Description: * ಕರ್ನಾಟಕ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರು ಬೆಂಗಳೂರಿನ ಮಲ್ಲೇಶ್ವರoನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮಾಡ್ಯೂಲರ್ ಐಸಿಯು ಘಟಕವನ್ನು ಲೋಕಾರ್ಪಣೆಗೊಳಿಸಿದರು. * ಈ ಮಾಡ್ಯೂಲರ್ ಐಸಿಯು ಘಟಕದಿಂದಾಗಿ ಕೋವಿಡ್-19 ಸಂಕಷ್ಟ ಪರಿಸ್ಥಿತಿ ಮತ್ತು ಇತರೆ ತುರ್ತು ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಬಳಕೆ ಮಾಡಿಕೊಳ್ಳಲು ಈ ಘಟಕ ಸಹಾಯಕಾರಿಯಾಗುತ್ತದೆ ಎಂದು ತಿಳಿಸಿದರು. ಈ ಮಾಡ್ಯೂಲರ್ ಐಸಿಯು ಘಟಕ ವಿಶೇಷತೆ: * ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಈ ಐಸಿಯು ಘಟಕವು ಕೇವಲ 3ತಿಂಗಳ ಕಾಲಾವಕಾಶದಲ್ಲಿ ಸ್ಥಾಪಿಸಲಾಗಿದೆ, ಹಾಗೂ ಇದು 100 ಹಾಸಿಗೆಗಳ ಐಸಿಯು ಘಟಕವನ್ನು ಹೊಂದಿದೆ. * ಪ್ರಸ್ತುತ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ 2,100ಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಹಾಗೂ ಕರ್ನಾಟಕ ರಾಜ್ಯವು ಕೋವಿಡ್ ಲಸಿಕೆ ನೀಡುವದರಲ್ಲಿ ಮುಂದೆ ಇದೆ ಎಂದು ತಿಳಿಸಿದ್ದಾರೆ. * ಕಂಟೇನರ್ ಮಾದರಿ ಐಸಿಯುಗಳನ್ನು ತಯಾರಿಸಲಾಗಿದೆ, ಒಟ್ಟು 100 ಹಾಸಿಗೆಗಳು ಸಾರ್ವಜನಿಕರ ಬಳಕೆಗೆ ಲಭ್ಯ ಇರುತ್ತವೆ. * ಈ 100 ಹಾಸಿಗೆಗಳ ಐಸಿಯು ಘಟಕದಲ್ಲಿ ಕೆಲಸ ಮಾಡಲು ತಜ್ಞ ವೈದ್ಯರು, ಅರೆವೈದ್ಯ ಸಿಬ್ಬಂದಿ, ನರ್ಸುಗಳು ಸೇರಿ ಒಟ್ಟಾರೆ 150 ಮಂದಿ ಸಿಬ್ಬಂದಿಗಳನ್ನೂ ನಿಯೋಜನೆ ಮಾಡಲಾಗಿದೆ. * ಬೆಂಗಳೂರು ಮೂಲದ "ರಿನ್ಯಾಕ್" ಎಂಬ ಕಂಪನಿಯು, ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ರೂಮುಗಳನ್ನು ಒಳಗೊಂಡ ಮಾಡ್ಯೂಲರ್ ಐಸಿಯು ಘಟಕವನ್ನು ತಯಾರಿಸಿದೆ.