Job Description: * ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ICC)ಯು ಪುರುಷರ ವಿಭಾಗದ 'ತಿಂಗಳ ಆಟಗಾರ ಪ್ರಶಸ್ತಿ'ಯನ್ನು ಟೀಂ ಇಂಡಿಯಾ ವಿಕೆಟ್ ಕೀಪರ್ ಹಾಗೂ ಯಂಗ್ ಬ್ಯಾಟ್ಸ್ಮನ್ ಆಗಿರುವ ರಿಷಭ್ ಪಂತ್ ರವರಿಗೆ ನೀಡಲಾಗಿದೆ ಎಂದು ICC ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ. ಈ ಪ್ರಶಸ್ತಿ ನೀಡಲು ಕಾರಣ: * ರಿಷಭ್ ಪಂತ್'ಅವರು ಈ ಹಿಂದೆ ಜನೇವರಿಯಲ್ಲಿ ನಡೆದ ಆಸ್ಟ್ರೇಲಿಯಾ-ಭಾರತ ಟೆಸ್ಟ್ ಪಂದ್ಯಗಳಲ್ಲಿ ತೋರಿದ ಉತ್ತಮ ಪ್ರದರ್ಶನವನ್ನು ಪರಿಗಣಿಸಿ ICC ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗಿದೆ. * ಇದು ಐಸಿಸಿ ಘೋಷಿಸಿದ ತಿಂಗಳ ಪ್ರಶಸ್ತಿಯಾಗಿದ್ದು ಈ ಪ್ರಶಸ್ತಿಯನ್ನು ಪ್ರಪ್ರಥಮ ರಿಷಭ್ ಪಂತ್'ಅವರು ಪಡೆದುಕೊಂಡಿದ್ದಾರೆ. * ಇನ್ನು ಮುಂದೆ ಐಸಿಸಿ ಪ್ರತಿ ತಿಂಗಳು ಉತ್ತಮ ಆಟಗಾರರನ್ನು ಗುರುತಿಸಿ ಈ ತಿಂಗಳ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದೆ. * ಐಸಿಸಿ ಘೋಷಿಸಿದ ತಿಂಗಳ ಪ್ರಶಸ್ತಿಗೆ ಭಾರತದ ರಿಷಭ್ ಪಂತ್ ಹಾಗೂ ಇಂಗ್ಲೆಂಡ್ ನಾಯಕ ಜೋ ರೂಟ್ ಜೊತೆಗೆ ಐರ್ಲೆಂಡ್ನ ಪೌಲ್ ಸ್ಟಿರ್ಲಿಂಗ್ ರವರ ಹೆಸರುಗಳನ್ನೂ ಆಯ್ಕೆ ಮಾಡಲಾಗಿತ್ತು ಆದರೆ ಈ ಮೂರೂ ಜನ ಆಟಗಾರರಲ್ಲಿ ರಿಷಭ್ ಪಂತ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ.