Job Description: * ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಕೊಡಗಿನಲ್ಲಿ ಸೇನಾ ಪರಂಪರೆ ಮತ್ತು ದೇಶದ ಸೇನಾ ಶಕ್ತಿಯನ್ನು ಸಾರುವ ಅಪರೂಪದ ಯುದ್ಧ ಸ್ಮಾರಕವಾದ ತಿಮ್ಮಯ್ಯ ವಸ್ತು ಸಂಗ್ರಾಲಯವನ್ನು ಲೋಕಾರ್ಪಣೆಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಟ್ಟರು. * ಕೆ.ಎಸ್ ತಿಮ್ಮಯ್ಯನವರು ಭಾರತ ದೇಶ ಕಂಡ ಮಹಾನ್ ವೀರ ಸೈನಿಕ ಹಾಗೂ ಇವರು ಕೊಡಗಿನ ಎರಡನೇ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. * ಕೆ.ಎಸ್ ತಿಮ್ಮಯ್ಯನವರ ವಸ್ತು ಸಂಗ್ರಾಲಯದಲ್ಲಿ ಯುದ್ಧ ಸ್ಮಾರಕ, ಸೂಪರ್ ಸಾನಿಕ ಯುದ್ಧ ವಿಮಾನ ಮತ್ತು ಯುದ್ಧ ಟ್ಯಾಂಕರ್'ಗಳನ್ನೂ ಹಾಗೂ ತಿಮ್ಮಯ್ಯನವರ ಸೇನಾ ಜೀವನ ಚರಿತ್ರೆ ಬಿಂಬಿಸುವ ಹಲವು ವಸ್ತುಗಳನ್ನು ವೀಕ್ಷಣೆಗೆ ಇಡಲಾಗಿದೆ ಎಂದು ತಿಳಿಸಿದರು.