Job Description: * ಅಮೆರಿಕದ ರಕ್ಷಣಾ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಲಾಕ್ಹೀಡ್ ಮಾರ್ಟಿನ್ ಭಾರತದ ವೈಮಾನಿಕ ಉದ್ಯಮದ ಕ್ಷೇತ್ರದಲ್ಲಿ ಅನ್ವೇಷಿಸಲು ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ (HAL)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಮೆರಿಕದ ರಕ್ಷಣಾ ಸಂಸ್ಥೆ ತಿಳಿಸಿದೆ. * ಈ ಒಪ್ಪಂದದಿಂದಾಗಿ ಅಮೇರಿಕ ದೇಶವು ಭಾರತದ ಜೊತೆಗಿನ ಉದ್ಯಮ ಹಾಗೂ ಬಾಂಧವ್ಯವನ್ನು ಬಲಪಡಿಸಿಕೊಳ್ಳಲಿದೆ, ಹಾಗೂ ಇದು ಏಶ್ಯಾದ ಅತಿ ದೊಡ್ಡ ವೈಮಾನಿಕ ಕಂಪನಿಗಳಲ್ಲಿ ಒಂದಾಗಿರುವ HAL ನೊಂದಿಗೆ ಈ ಅವಕಾಶದಲ್ಲಿ ಕೆಲಸ ಮಾಡಲು ಅಮೇರಿಕ ಸಿದ್ಧವಾಗಿದೆ ಎಂದು ಲಾಕ್ಹೀಡ್ ಮಾರ್ಟಿನ್ ಏರೋನಾಟಿಕ್ಸ್-ಇಂಟಗ್ರೇಟೆಡ್ ಫೈಟರ್ ಗ್ರೂಪ್ನ ವ್ಯವಹಾರ ಅಭಿವೃದ್ಧಿಯ ಉಪಾಧ್ಯಕ್ಷ ಜೆ.ಆರ್. ಮೆಕ್ಡೊನಾಲ್ಡ್ ತಿಳಿಸಿದ್ದಾರೆ. * ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್, ಲಾಕ್ಹೀಡ್ ಮಾರ್ಟಿನ್ನೊಂದಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಲು ಸಿದ್ಧವಾಗಿದೆ ಎಂದು HAL ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಆರ್. ಮಾಧವನ್ ಅಭಿಪ್ರಾಯವನ್ನು ತಿಳಿಸಿದರು.