Job Description: * ಉತ್ತರಾಖಂಡ್ ರಾಜ್ಯವು ಪುರಾಣ ಪ್ರಸಿದ್ಧ ತೆಹ್ರಿ ಸರೋವರ ಉತ್ಸವವನ್ನ ಇದೆ ತಿಂಗಳು ಫೆಬ್ರವರಿ 16 ಮತ್ತು17ನೇ ದಿನಾಂಕದಂದು ನಡೆಸಲು ಸಿದ್ಧತೆಯನ್ನ ಉತ್ತರಾಖಂಡ್ ರಾಜ್ಯದ ಪ್ರವಾಸಿ ಇಲಾಖೆ ಮಾಡುತ್ತಿದೆ. * ಏಷ್ಯಾದ ಅತಿದೊಡ್ಡ ಸರೋವರ ಉತ್ಸವ ಎನ್ನುವ ಹೆಗ್ಗಳಿಕೆಗೆ ಉತ್ತರಾಖಂಡದ ತೆಹ್ರಿ ಸರೋವರ ಉತ್ಸವ ಪಾತ್ರವಾಗಿದೆ. ಈ ಉತ್ಸವಕ್ಕೆ ಪ್ರವಾಸಿಗರ ಆಗಮನಕ್ಕೆ ರಾಜ್ಯ ಪ್ರವಾಸಿ ಇಲಾಖೆ ಸಿದ್ಧವಾಗಿದೆ ಎಂದು ಉತ್ತರಾಖಂಡ್ ಸರ್ಕಾರ ತಿಳಿಸಿದೆ. * ಈ ತೆಹ್ರಿ ಸರೋವರ ಉತ್ಸವದಲ್ಲಿ ವೈಮಾನಿಕ ಕ್ರೀಡೆ, ಬೆಂಕಿಯ ಸಾಹಸ ಚಟುವಟಿಕೆಗಳು ಹಾಗೂ ಸಂಗೀತ ಪ್ರದರ್ಶನ, ಸಾಂಸ್ಕೃತಿಕ ನೃತ್ಯ, ಯೋಗ ಪ್ರದರ್ಶನ, ಜಲ ಕ್ರೀಡೆ ತೆಹ್ರಿ ಸರೋವರ ಉತ್ಸವದಲ್ಲಿ ಪ್ರಮುಖವಾಗಿವೆ.