Job Description: * ಭಾರತ ಮತ್ತು ಅಮೇರಿಕಾದ ಸೇನಾ ಪಡೆಗಳು ಪಾಕಿಸ್ತಾನದ ಗಡಿಯಲ್ಲಿ ಹದಿನೈದು ದಿನಗಳ ಕಾಲ ಜಂಟಿಯಾಗಿ ಮಿಲಿಟರಿ ವ್ಯಾಯಾಮದಲ್ಲಿ ಭಾಗವಹಿಸಲಿವೆ, ಪ್ರಸ್ತುತ ಅಮೆರಿಕದ 270 ಸೈನಿಕರು ರಾಜಸ್ಥಾನದ ಸೂರತ್ ನ ಮಹಾಜನ್ ಫೀಲ್ಡ್ ಫೈರಿಂಗ್ ಶ್ರೇಣಿಗೆ ಬಂದು ತಲುಪಿದ್ದಾರೆ ಎಂಬ ಮಾಹಿತಿ ಇದೆ. * ಭಾರತ ಮತ್ತು ಅಮೇರಿಕಾದ ಮಿಲಿಟರಿ ಪಡೆಗಳ ಸಮರಾಭ್ಯಾಸ ರಾಜಸ್ಥಾನದ ಸೂರತ್'ನ ಮರಳು ಭೂಮಿಯಲ್ಲಿ ಜಂಟಿಯಾಗಿ ನಡೆಯಲಿದೆ ಎಂದು ಭಾರತೀಯ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಬ್ ಶರ್ಮಾ ಮಾಹಿತಿಯನ್ನು ನೀಡಿದ್ದಾರೆ. * ಈ ಜಂಟಿ ಸಮರಾಭ್ಯಾಸವು ಫೆಬ್ರವರಿ.21ರ ವರೆಗೆ ನಡೆಯಲಿದ್ದು, ಹಾಗೂ ಇದರಲ್ಲಿ ಭಾಗವಹಿಸಲು ಜಮ್ಮು-ಕಾಶ್ಮೀರದ ರೈಫಲ್ಸ್ನ ಸಪ್ತ ಶಕ್ತಿ ಕಮಾಂಡ್ನ 11ನೆ ಬೆಟಾಲಿಯನ್ ಸೈನಿಕರು ಭಾರತ ಸೇನೆಯ ಹಲವು ಸೈನಿಕರು ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.