Job Description: * ಕೇರಳ ರಾಜ್ಯ ರಾಜಧಾನಿಯಾಗಿರುವ ತಿರುವನಂತಪುರ ಮತ್ತು ಕಾಸರಗೋಡು ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದಾಗಿ ₹64 ಸಾವಿರ ಕೋಟಿ ಯೋಜನೆಯ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆಯನ್ನು ನೀಡಿದೆ. * ಸೆಮಿ ಹೈ ಸ್ಪೀಡ್ ರೈಲು ಯೋಜನೆಗೆ ಕೇರಳ ಸರ್ಕಾರ ಹಾಗೂ ಜಪಾನ್ ಇಂಟರ್ನ್ಯಾಷನಲ್ ಕೋ ಆಪರೇಟಿವ್ ಏಜೆನ್ಸಿ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರವು ಕೇರಳ ರಾಜ್ಯ ಸರ್ಕಾರಕ್ಕೆ ಹೇಳಿದೆ. * ಏನಿದು ಯೋಜನೆ? - ಈ ರೈಲು ಯೋಜನೆಯಿಂದಾಗಿ 4 ಗಂಟೆಯಲ್ಲಿ 529.45 ಕಿ.ಮೀ ದೂರವನ್ನು ಕ್ರಮಿಸಬಹುದಾಗಿದೆ. ಪ್ರಸ್ತುತ ತಿರುವನಂತಪುರ-ಎರ್ನಾಕುಲಂ-ಕೊಚ್ಚಿ ಮಾರ್ಗದ ನಗರಗಳನ್ನು ಸೇರಲು 12 ಗಂಟೆಗಳ ಸಮಯ ಬೇಕಾಗುತ್ತೆ, ಇದೀಗ ಈ ದೂರದ ಪಯಣವನ್ನು ಸೆಮಿ ಹೈ ಸ್ಪೀಡ್ ರೈಲಿನ ಮೂಲಕ ಕೇವಲ 90 ನಿಮಿಷಗಳಲ್ಲಿ ಸೇರಬಹುದು ಎಂದು ಕೇರಳ ಸರ್ಕಾರ ಈ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದೆ.