Job Description: * ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚಾಗಿ ಬಳಸುತ್ತಿರುವ ಪದವಾದ 'ಆತ್ಮನಿರ್ಭರ'ವನ್ನು 2020ರ ಆಕ್ಸ್ಫರ್ಡ್ ನಿಘಂಟಿನ ಹಿಂದಿ ಪದ ಎಂದು ಆಯ್ಕೆ ಮಾಡಲಾಗಿದೆ. * ಭಾರತೀಯ ಜನರು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಮಾಡಿದ ಅಪಾರ ಸಾಧನೆಯ ನೆನೆಪಿಗೊಸ್ಕರ ಈ ಪದವನ್ನು ಆಯ್ಕೆ ಮಾಡಲಾಗಿದೆ ಎಂದು ಭಾಷಾ ತಜ್ಞರಾದ ಕೃತಿಕಾ ಅಗರ್ ವಾಲ್, ಪೂನಂ ನಿಗಂ ಸಹಾಯ್ ಹಾಗೂ ಇಮೊಗೆನ್ ಫಾಕ್ಸ್ ವೆಲ್ ಅವರನ್ನು ಒಳಗೊಂಡಿರುವ ಸಲಹಾ ಸಮಿತಿ ಮಾಹಿತಿಯನ್ನು ನೀಡಿದೆ. * ಈ ಮೊದಲು ಅಂದರೆ 2017ರಲ್ಲಿ ಆಧಾರ್, 2018ರಲ್ಲಿ ನಾರಿ ಶಕ್ತಿ, 2019ರಲ್ಲಿ ಸಂವಿಧಾನ್ ಎಂಬ ಹಿಂದಿ ಪದಗಳನ್ನು ಆಯ್ಕೆ ಮಾಡಿ, ಪ್ರಸ್ತುತ ಇದೀಗ 2020ರಲ್ಲಿ 'ಆತ್ಮನಿರ್ಭರತಾ' ಎನ್ನುವ ಪದವನ್ನು ಆಕ್ಸ್ಫರ್ಡ್ ನಿಘಂಟಿನ ಮೂಲಕ ಆಯ್ಕೆ ಮಾಡಿದೆ. * ಆತ್ಮನಿರ್ಭರ ಭಾರತ ಎಂಬ ಯೋಜನೆ ಉದ್ಯೋಗ ಸೃಷ್ಟಿಮಾಡುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಘೋಷಣೆ ಮಾಡಿದೆ.