Job Description: * ಇತ್ತೀಚಿಗೆ ಅಮೇರಿಕಾದಲ್ಲಿ ಅಧಿಕಾರ ಸ್ವೀಕರಿಸಿ ನೂತನ ಅಧ್ಯಕ್ಷರಾಗಿರುವ ಜೋ ಬೈಡನ್ ಅವರ ಸರ್ಕಾರದಲ್ಲಿ ಭಾರತೀಯ ಮೂಲದ ಅಮೆರಿಕದ ವಿಜ್ಞಾನಿಯಾಗಿರುವ ಭವ್ಯಾ ಲಾಲ್ ಅವರು ಇತ್ತೀಚಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನಾಸಾ(NASA) ಕೇಂದ್ರದ ಕಾರ್ಯನಿರ್ವಾಹಕ ಮುಖ್ಯಸ್ಥೆಯಾಗಿ ಸೇರ್ಪಡೆಗೊಂಡಿದ್ದಾರೆ. * ಈ ಮೊದಲು ಭಾರತೀಯ ಮೂಲದ ವಿಜ್ಞಾನಿಯಾಗಿರುವ ಭವ್ಯಾ ಲಾಲ್ ಅವರು ಎಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ವಿಷಯಗಳಲ್ಲಿ ಅತಿ ಹೆಚ್ಚು ಜ್ಞಾನವನ್ನು ಪಡೆದಿದ್ದಾರೆ. * ಪ್ರಸ್ತುತ ಇವರು 2005 ರಿಂದ 2020ರ ತನಕ ಇನ್ಸಿಟ್ಯೂಟ್ ಫಾರ್ ಡಿಫೆನ್ಸ್ ಅನಾಲಿಸಿಸ್ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಂಸ್ಥೆಯ ಸಂಶೋಧನಾ ತಂಡದ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ನಾಸಾ ಮಾಹಿತಿಯನ್ನು ನೀಡಿದೆ.