Job Description: * ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಯವರು ಕನ್ನಡ ಸಾಹಿತ್ಯದ ಕವಿ ಅಷ್ಟೇ ಅಲ್ಲದೆ, ಭಾಷಾ ವೈವಿಧ್ಯದ ವಿಭಿನ್ನ ಕಾವ್ಯದ ಮೂಲಕ ಸಾಹಿತ್ಯ ಲೋಕದಲ್ಲಿ ವಿಶೇಷ ಸ್ಥಾನ ಮಾನ ಪಡೆದ ಕವಿಯಾಗಿದ್ದು, ಇವರಿಗೆ ವರಕವಿ ಎಂದೇ ಕರೆಯಲಾಗುತ್ತದೆ. * ದ.ರಾ.ಬೇಂದ್ರೆ ಅವರು 1896 ಜನೇವರಿ 31ರಂದು ಧಾರವಾಡದಲ್ಲಿ ಜನಿಸಿದರು, ಇವರ ತಂದೆ ರಾಮಚಂದ್ರ ಬೇಂದ್ರೆ, ತಾಯಿ ಅಂಬವ್ವ, ಇವರ ಮಾತೃಭಾಷೆ ಮರಾಠಿಯಾಗಿತ್ತು. * ದ.ರಾ.ಬೇಂದ್ರೆ ಅವರು 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1959ರಲ್ಲಿ 'ಅರಳು ಮರಳು' ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1974ರಲ್ಲಿ 'ನಾಕುತಂತಿ' ಕವನ ಸಂಗ್ರಹಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು, ಹೀಗೆ ಹಲವು ಕನ್ನಡ ಸಾಹಿತ್ಯ ಕೃತಿಗಳನ್ನು ರಚಿಸಿ ಜನಪ್ರಿಯ ಕವಿಯಾಗಿದ್ದರು.