Job Description: * ಇತ್ತೀಚಿಗೆ ಬ್ರಿಟನ್ ಸರ್ಕಾರವು ಹಾಂಗ್ಕಾಂಗ್ ನಿವಾಸಿಗಳಿಗೆ ಹೊಸ ವೀಸಾ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯಿಂದ ಹಾಂಗ್ಕಾಂಗ್ ನಿವಾಸಿಗಳು ವೀಸಾ ಪಡೆದು, ಬ್ರಿಟನ್ ನಾಗರಿಕತ್ವವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. * ಈ ಬ್ರಿಟನ್ ವೀಸಾ ಯೋಜನೆಯಿಂದಾಗಿ ಹಾಂಗ್ಕಾಂಗ್'ನ 3 ಲಕ್ಷಕ್ಕೂ ಅಧಿಕ ಪ್ರಜೆಗಳಿಗೆ ಅನುಕೂಲವಾಗಲಿದೆ ಎಂದು ಬ್ರಿಟನ್ ಸರ್ಕಾರ ಅಭಿಪ್ರಾಯ ಪಟ್ಟಿದೆ. * ಬ್ರಿಟನ್ ಸರ್ಕಾರ ಈ ಮೊದಲು ನೀಡಲಾಗಿದ್ದ 'ಬ್ರಿಟಿಷ್ ನ್ಯಾಷನಲ್ ಓವರ್ಸೀಸ್' ವೀಸಾಗಳಿಗೆ ಜನವರಿ 31 ರಿಂದ ಮಾನ್ಯತೆ ಇರುವುದಿಲ್ಲ ಎಂಬ ಮಾಹಿತಿಯನ್ನು ಚೀನಾ ಮತ್ತು ಹಾಂಗ್ಕಾಂಗ್ ಸರ್ಕಾರಗಳು ತಿಳಿಸಿದವು, ಇದೆ ಕಾರಣಕ್ಕಾಗಿ ಬ್ರಿಟನ್ ಸರ್ಕಾರ ಹೊಸ ವೀಸಾ ಯೋಜನೆಯನ್ನು ಜಾರಿಗೆ ಗೊಳಿಸಿದೆ.