Job Description: * 'ವಿ' ಎನ್ನುವದು ಒಂದು ದೇಶದ ಆರ್ಥಿಕ ಆರೋಗ್ಯವನ್ನು ಅಳೆಯುವ ಮಾಪನವಾಗಿದೆ, 'ವಿ' ಆಕಾರದ ಬೆಳವಣಿಗೆ ದಾರಿಯಲ್ಲಿ ಭಾರತ ದೇಶದ ಆರ್ಥಿಕ ಸ್ಥಿತಿ ಕ್ರಮೇಣವಾಗಿ ಬಲಿಷ್ಠವಾಗಿ ಸಾಗುತ್ತಿದೆ ಎಂದು ಆರ್ಥಿಕ ಸಮೀಕ್ಷೆಯು ಪ್ರತಿಪಾದಿಸುತ್ತಿದೆ. * 'ವಿ' ಆಕಾರದ ಬೆಳವಣಿಗೆ ಎಂದರೆ ದೇಶವು ಆರ್ಥಿಕ ಹಿಂಜರಿತದಿಂದಾಗಿ ಕೆಳಕ್ಕೆ ಕುಸಿದು, ಅನಂತರ ಅಷ್ಟೇ ವೇಗವಾಗಿ ಹಾಗೂ ಬಲಿಷ್ಠ ಶಕ್ತಿಯಾಗಿ ಬೆಳೆದು 'ಗ್ರಾಫ್ ವಿ' ಆಕಾರದಲ್ಲಿ ಕಾಣಿಸುವದು, ಉದ್ಯೋಗ, ಜಿಡಿಪಿ, ಕೈಗಾರಿಕ ಉತ್ಪಾದನ ಸೂಚ್ಯಂಕಗಳಂಥ ಅಂಶಗಳನ್ನು ಗಮನಿಸಿ ಅರ್ಥಶಾಸ್ತ್ರಜ್ಞರು ಈ ಗ್ರಾಫ್ ಸಿದ್ಧಪಡಿಸುತ್ತಾರೆ. ಇನ್ನು 'ವಿ' ಆಕಾರದ ಬೆಳವಣಿಗೆಯನ್ನು ಉತ್ತಮ ಬೆಳವಣಿಗೆಯೆಂದು ಪರಿಗಣಿಸಲಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ.