Job Description: * ಭಾರತ ದೇಶದ ಬಜೆಟ್ ಮಂಡನೆ ಮಾಡುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರವರು ಪಾತ್ರರಾಗಿದ್ದಾರೆ. ಪ್ರಸ್ತುತ ನಿರ್ಮಲಾ ಸೀತಾರಾಮನ್ ಅವರು ಆಡಳಿದಲ್ಲಿರುವ ಪಕ್ಷದ ಕೇಂದ್ರ ಹಣಕಾಸು ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. * ಈ ಮೊದಲು ಅಂದರೆ ಸರಿ ಸುಮಾರು 51 ವರ್ಷಗಳ ಹಿಂದೆ ಮಾಜಿ ಪ್ರಧಾನಿಯಾಗಿ ಸೇವೆಸಲ್ಲಿಸಿದ ದಿವಂಗತ ಇಂದಿರಾ ಗಾಂಧಿಯವರು 1970 ಫೆಬ್ರವರಿ 28ರಂದು ಪ್ರಧಾನ ಮಂತ್ರಿ ಹಾಗೂ ವಿತ್ತ ಸಚಿವೆಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಬಜೆಟ್ ಮಂಡನೆಯನ್ನು ಮಾಡಿದ್ದರು.