Job Description: * ಮಯನ್ಮಾರ್ ದೇಶದಲ್ಲಿ ಒಂದು ವರ್ಷ ರಾಜ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಪ್ರಸ್ತುತ ಇಲ್ಲಿನ ಆಡಳಿತ ಪಕ್ಷದ ನಾಯಕಿ ಅಂಗ್ ಸಾನ್ ಸೂಕಿ ಮತ್ತು ರಾಷ್ಟ್ರದ ಅಧ್ಯಕ್ಷರನ್ನು ಮಯನ್ಮಾರ್ ದೇಶದ ಸೇನಾಪಡೆ ಬಂಧಿಸಿದೆ ಎಂದು ಸೂಕಿ ಪಕ್ಷದ ವಕ್ತಾರ ಮಾಹಿತಿಯನ್ನು ನೀಡಿದ್ದಾರೆ. * ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷವು ಇತ್ತೀಚಿಗೆ ಮಯನ್ಮಾರ್ ದೇಶದಲ್ಲಿ ನಡೆದ ಚುನಾವಣೆಯಲ್ಲಿ ಸುಲಭವಾಗಿ ಜಯಗಳಿಸಿತ್ತು ಆದರೆ ಇಲ್ಲಿನ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮಯನ್ಮಾರ್ ದೇಶದ ಸೇನೆ ಕಳೆದ ವಾರ ಆರೋಪ ಮಾಡಿ ಅಲ್ಲಿನ ಡೆಮಾಕ್ರಸಿ ಪಕ್ಷದ ಅಂಗಸಾನ್ ಸೂಕಿ ಮತ್ತು ಅಧ್ಯಕ್ಷ ವಿನ್ ಮೈಂಟ್ ಅವರನ್ನು ರಾಜಧಾನಿ ನೇಪ್ಯಿಡಾವ್ನಲ್ಲಿ ಬಂಧಿಸಲಾಗಿದೆ ಎಂದು ಎನ್ಎಲ್ಡಿ ಪಕ್ಷದ ವಕ್ತಾರ ಮೈಯೋ ನ್ಯೂಂಟ್ ಅವರು ಮಾಹಿತಿಯನ್ನು ನೀಡಿದ್ದಾರೆ. ಇದೆ ಕಾರಣಕ್ಕಾಗಿ ಮಯನ್ಮಾರ್ ದೇಶದಲ್ಲಿ ಒಂದು ವರ್ಷ ರಾಜ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.