Job Description: * 2020ರ ಭಾರತ ನ್ಯಾಯಾಧಿಕಾರ ವರದಿ ಪ್ರಕಾರ, ಜನರಿಗೆ ನ್ಯಾಯ ಒದಗಿಸಿ ಕೊಡುವದರಲ್ಲಿ ಮಹಾರಾಷ್ಟ್ರ ಸರ್ಕಾರ ಅತ್ಯುತ್ತಮವಾಗಿದೆ, ಮತ್ತು ಜನರಿಗೆ ತೀರಾ ಕಳಪೆ ನ್ಯಾಯ ಒದಗಿಸಿ ಕೊಡುವ ಮೂಲಕ ಉತ್ತರ ಪ್ರದೇಶ ರಾಜ್ಯ ಸರ್ಕಾರ ಅಪಖ್ಯಾತಿ ಪಡೆದಿದೆ. * ದೇಶದ 11 ಅತ್ಯುತ್ತಮ ರಾಜ್ಯಗಳಲ್ಲಿ ಮಹಾರಾಷ್ಟ್ರ ಸರ್ಕಾರವು 10 ಅಂಕಗಳ ಪೈಕಿ 5.77 ಅಂಕಗಳನ್ನು ಪಡೆದು ಉತ್ತಮ ಎನಿಸಿಕೊಂಡಿದೆ, ಹಾಗೂ ಉತ್ತರ ಪ್ರದೇಶ ಸರ್ಕಾರವು 3.15 ಅಂಕಗಳನ್ನು ಪಡೆದುಕೊಂಡು ಕಳಪೆ ಎನಿಸಿಕೊಂಡಿದೆ. * ಪೊಲೀಸ್ ಮತ್ತು ಪೊಲೀಸ್ ಅಧಿಕಾರಿಗಳು, ಕಾರಾಗೃಹ ಸಿಬ್ಬಂದಿ ಸೇರಿದಂತೆ ಹೀಗೆ ಹಲವು ಅಂಶಗಳ ಶ್ರೇಯಾಂಕವನ್ನು ಪರಿಗಣಿಸಿ ಭಾರತ ನ್ಯಾಯಾಧಿಕಾರ ವರದಿಯನ್ನು ನೀಡುತ್ತದೆ.