Job Description: * ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 'ಐಸಿಸಿ ಪ್ಲೇಯರ್ ಆಫ್ ದಿ ಮಂತ್' ಎಂಬ ಪ್ರಶಸ್ತಿಯನ್ನು ನೀಡುವದಾಗಿ ಘೋಷಿಸಿದೆ. ಈ ಪ್ರಶಸ್ತಿಯನ್ನು ವರ್ಷಪೂರ್ತಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಅತ್ಯುತ್ತಮ ಪ್ರದರ್ಶನಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ICC ತಿಳಿಸಿದೆ. * ಪುರುಷರ ಮತ್ತು ಮಹಿಳಾ ವಿಭಾಗದ 'ಐಸಿಸಿ ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗಾಗಿ ಆಟಗಾರರ ಗುರುತಿಸಿ ಆಯ್ಕೆ ಮಾಡಲು ವೋಟಿಂಗ್ ನಲ್ಲಿ ಅಭಿಮಾನಿಗಳನ್ನೂ ಸೇರಿಸಿಕೊಳ್ಳಲಾಗುವುದು ಎಂಬ ಮಾಹಿತಿಯನ್ನು ICC ನೀಡಿದೆ.