Job Description: * ಮಾಜಿ ಸಚಿವ, ಹಾಗೂ ಸಿಂದಗಿ ಕ್ಷೇತ್ರದ ಶಾಸಕ ಎಂ ಸಿ ಮನಗೂಳಿ ಅವರು ಇತ್ತೀಚಿಗೆ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು. * ಸಿಂದಗಿ ಕ್ಷೇತ್ರದ ಶಾಸಕ ಎಂ ಸಿ ಮನಗೂಳಿ ಅವರು 2018 ರಲ್ಲಿ ಜೆಡಿಎಸ್ ಪಕ್ಷದಿಂದ ಜಯಶಾಲಿಯಾಗಿ ಶಾಸಕರಾಗಿದ್ದರು, ಆ ಸಮಯದಲ್ಲಿ ಕಾಂಗ್ರೇಸ್-ಜೆಡಿಎಸ್ ನ ಮೈತ್ರಿ ಸರ್ಕಾರದ ಕುಮಾರಸ್ವಾಮಿ ನೇತೃತ್ವದಲ್ಲಿ ತೋಟಗಾರಿಕಾ ಸಚಿವರಾಗಿ, ಜೊತೆಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಮೊದಲು 1994ರ H.K ಪಟೇಲ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಉತ್ತಮ ಕಾರ್ಯ ವೈಖರಿಯನ್ನು ತೋರಿದ್ದರು.