Job Description: * ಫ್ರಾನ್ಸ್ ದೇಶದಲ್ಲಿನ ಡಾಸೊ ಏವಿಯೇಶನ್ ಕಂಪನಿ ತಯಾರಿಸುತ್ತಿರುವ ರಫೇಲ್ ಯುದ್ಧವಿಮಾನಗಳು ಪೈಕಿ 3ನೇ ಹಂತದಲ್ಲಿ 3 ರಫೇಲ್ ಯುದ್ಧ ವಿಮಾನಗಳು ಸರಿ ಸುಮಾರು 7 ಸಾವಿರ ಕಿ.ಮೀ ದೂರವನ್ನು ಕ್ರಮಿಸಿ ಗುಜರಾತನ ಜಾಮ್ನಗರ್ ವಾಯುನೆಲೆಗೆ ಆಗಮಿಸಿವೆ. * ಫ್ರಾನ್ಸ್ ದೇಶವು 59 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ರಫೇಲ್ ಯುದ್ಧವಿಮಾನಗಳನ್ನು ಕಳೆದ ವರ್ಷ ಸೆ.10 ರಂದು ವಾಯುಪಡೆಗೆ ಸೇರಿಕೊಂಡಿವೆ. ಹಾಗೂ ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳು ಕಳೆದ ವರ್ಷ ನವೆಂಬರ್ನಲ್ಲಿ ಭಾರತದ ವಾಯು ಪಡೆಗೆ ಸೇರಿಕೊಂಡಿವೆ. ಇದೀಗ 3ನೇ ಹಂತದ ರಫೇಲ್ ಯುದ್ಧ ವಿಮಾನಗಳು ಭಾರತವನ್ನು ತಲುಪಿವೆ. * ಫ್ರಾನ್ಸ್ ದೇಶದಿಂದ 2023ರ ವೇಳೆಗೆ ಭಾರತಕ್ಕೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳು ಬಂದಿಳಿಯಲಿವೆ ಎಂದು ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿ ಅವರು ಮಾಹಿತಿಯನ್ನು ನೀಡಿದ್ದಾರೆ.