Job Description: * ಖಾಸಗಿ ಸಂಸ್ಥೆಗಳಾದ 'ನೆಟ್ವರ್ಕ್ 18TV' ಹಾಗೂ 'ಹಾರ್ಪಿಕ್ ಇಂಡಿಯಾ' ಜಂಟಿಯಾಗಿ "ಜಲ ಸಂರಕ್ಷಣೆ ಪ್ರತಿಜ್ಞೆ" (Mission Paani) ಕಾರ್ಯಕ್ರಮವನ್ನು ನಡೆಸಿವೆ. ಈ ಅಭಿಯಾನಕ್ಕೆ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಕೈ ಜೋಡಿಸಿದ್ದಾರೆ, ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ 'ಮಿಷನ್ ಪಾನಿ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ, ಜಲ ಬಿಕ್ಕಟ್ಟು, ನೀರಿನ ಸ್ವಚ್ಛತಾ ಆಂದೋಲನದ ಮತ್ತು ನೀರಿನ ಸಂರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. - ಈಗಾಗಲೇ ಸಾವಿರಾರು ಜನರು ಜಲ ಪ್ರತಿಜ್ಞೆ ಮಾಡುವ ಮೂಲಕ ನೀರಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲು ಸಿದ್ದರಾಗಿದ್ದಾರೆ.