Job Description: * ಇದೀಗ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ದೇಶದ ಮೊಟ್ಟ ಮೊದಲ ಶ್ರೀಗಂಧದ ವಸ್ತು ಸಂಗ್ರಹಾಯ ಪ್ರಾರಂಭಿಸಿದೆ. ಪ್ರಸ್ತುತ ದೇಶದಲ್ಲೇ ಅತಿ ಹೆಚ್ಚು ಶ್ರೀಗಂಧ ಬೆಳೆಯುವ ಹಾಗೂ ಮಾರಾಟ ಮಾಡುವ ರಾಜ್ಯ ಕರ್ನಾಟಕವಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯವನ್ನು ಶ್ರೀಗಂಧದ ನಾಡು ಎಂದು ಕರೆಯಲಾಗುತ್ತದೆ. ಈ ಶ್ರೀಗಂಧದ ಮ್ಯೂಸಿಯಂ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ. * ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಕೃಷಿ ಅಭಿವೃದ್ದಿ ಹಾಗೂ ಅರಣ್ಯ ಸಂರಕ್ಷಣೆ ಜೊತೆಗೆ ಶ್ರೀಗಂಧದ ಅಭಿವೃದ್ದಿಗೆ ಪ್ರಮುಖ ಪಾತ್ರವಹಿಸುತ್ತಿದೆ.