Job Description: * ಇತ್ತೀಚಿಗೆ ಒಡಿಶಾದ ಕರಾವಳಿಯಲ್ಲಿ ಹಾಕ್-ಐ ಯುದ್ಧ ವಿಮಾನ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು, ಈ ಹಾಕ್-ಎಂಕೆ 132ಐ ಯುದ್ಧ ವಿಮಾನವನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಇಮಾರತ್ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದೆ. ಇದು ನೆಲದಿಂದ ಸರಿ ಸುಮಾರು 100 ಕಿ.ಮೀ. ದೂರದ ಶತ್ರುಗಳ ಅಡುಗು ನೆಲೆಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. * ಭಾರತದ ಆತ್ಮನಿರ್ಭರ ಯೋಜನೆಯ ಅಭಿಯಾನಕ್ಕೆ HAL ವಿಶೇಷ ಸ್ಥಾನ ಒದಗಿಸುತ್ತಿದೆ, ಹಾಗೂ ದೇಶೀಯವಾಗಿ ಅಭಿವೃದ್ಧಿಪಡಿಸಿದ ಈ ಹಾಕ್-ಐ ಯುದ್ಧ ವಿಮಾನವನ್ನು ಪರಿಣಾಮಕಾರಿ ಬಳಕೆಗೆ ಸಹಾಯವಾಗಲಿದೆ ಎಂದು ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ರವರು ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಈ ಹಾಕ್-ಎಂಕೆ 132ಐ ಯುದ್ಧ ವಿಮಾನವು 12 ದೇಶಗಳಲ್ಲಿ ತನ್ನ ಕಾರ್ಯವನ್ನು ನಡೆಸುತ್ತಿದೆ ಎಂದು HAL ಮಾಹಿತಿಯನ್ನು ನೀಡಿದೆ.