Job Description: * ಕೇರಳದ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ವತಿಯಿಂದ ಕಾರ್ಮಿಕ ಚಳವಳಿ ಇತಿಹಾಸ ತಿಳಿಸುವ ವಸ್ತು ಸಂಗ್ರಹಾಲಯವನ್ನು (ಮ್ಯೂಸಿಯಂ) ಅನ್ನು ಕೇರಳದ ಅಳಪ್ಪುಳ ಎಂಬಲ್ಲಿ ಸ್ಥಾಪನೆ ಮಾಡುವುದಾಗಿ ಇತ್ತೀಚಿಗೆ ಕೇರಳ ಸರ್ಕಾರ ತಿಳಿಸಿದೆ. * ಕೇರಳದ ಅಳಪ್ಪುಳ ಎಂಬ ನಗರದಲ್ಲಿ ಈ ಮೊದಲು ಬಂದರು ಹಾಗೂ ತೆಂಗಿನನಾರು ಕುರಿತ ಮಾಹಿತಿ ನೀಡುವ ಮ್ಯೂಸಿಯಂಗಳನ್ನೂ ಸ್ಥಾಪನೆ ಮಾಡಲಾಗಿದ್ದು, ಮತ್ತೆ ಇದೀಗ ಈ ಅಳಪ್ಪುಳದಲ್ಲಿ ಸ್ಥಾಪನೆಯಾಗುವ ಮ್ಯೂಸಿಯಂನಲ್ಲಿ ಕಾರ್ಮಿಕ ಚಳವಳಿಗೆ ಸಂಬಂಧಿಸಿದ ದಾಖಲೆಗಳು, ಮತ್ತು ಅದರ ಚಿತ್ರಗಳನ್ನು ಈ ಮ್ಯೂಸಿಯಂನಲ್ಲಿ ಸ್ಥಾಪಿಸಲಾಗುವದು ಎಂದು ಕೇರಳ ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ತಿಳಿಸಿದೆ.