Job Description: * ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್ ಗುಲಾಂ ಮುಸ್ತಫಾಖಾನ್ ರವರು ಇತ್ತೀಚಿಗೆ ತಮ್ಮ 89ನೇ ವಯಸ್ಸಿನಲ್ಲಿ ವಿಧಿವಶರಾದರು. * ಮೂಲತಃ ಸಂಗೀತಗಾರರ ಕುಟುಂಬದವರಾದ ಉಸ್ತಾದ್ ಗುಲಾಂ ಅವರು 1931ರ ಮಾರ್ಚ್ 3ರಂದು ಉತ್ತರ ಪ್ರದೇಶದ ಬದಾಯುಂನಲ್ಲಿ ಜನಿಸಿದರು, ಮತ್ತು ತಮ್ಮ ಹಿಂದೂಸ್ತಾನಿ ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಅವರ ತಂದೆಯವರಾದ ಉಸ್ತಾದ್ ವಾರಿಸ್ ಹುಸೇನ್ ಖಾನ್ ರಲ್ಲಿ ಅಭ್ಯಾಸ ಮಾಡಿದ್ದರು. * ಹಿಂದೂಸ್ತಾನಿ ಗಾಯಕ ಉಸ್ತಾದ್ ಗುಲಾಂ ಅವರಿಗೆ 1991ರಲ್ಲಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಸಾಧನೆ ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು, ಮತ್ತು 2006ರಲ್ಲಿ ಪದ್ಮಭೂಷಣ ಹಾಗೂ 2018ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು, ಇದಾದ ನಂತರ 2003ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿತ್ತು.