Job Description: * ಭಾರತ ಸರ್ಕಾರದ ಉದಯ್ ಯೋಜನೆಯಡಿಯಲ್ಲಿ, ಭಾರತ ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆಯನ್ನು ಹರಿಯಾಣ ರಾಜ್ಯದಲ್ಲಿ ಪ್ರಾರಂಭಿಸಿದೆ, ಈಗಿನ ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರವರು "ಚಂಡೀಗಢ- ಹಿಸಾರ್" ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಟ್ಯಾಕ್ಸಿ ಸೇವೆಗೆ ಇತ್ತೀಚಿಗೆ ಚಾಲನೆ ನೀಡಿದರು. * ಹರಿಯಾಣ ರಾಜ್ಯದಲ್ಲಿ ಚಾಲನೆಗೊಂಡಿರುವ ಈ ಏರ್ ಟ್ಯಾಕ್ಸಿ ಇಂದಾಗಿ ಕೇವಲ 45 ನಿಮಿಷಗಳಲ್ಲಿ ಚಂಡೀಗಢದಿಂದ ಹಿಸಾರ್ಗೆ ಪ್ರಯಾಣಿಸಬಹುದಾಗಿದೆ, ಈ ಏರ್ ಟ್ಯಾಕ್ಸಿ ಯಲ್ಲಿ ಒಟ್ಟು 4ಸೀಟುಗಳನ್ನೂ ನಿಗದಿಪಡಿಸಲಾಗಿದೆ, ಅದರಲ್ಲಿ 1 ಸೀಟು ಚಾಲಕನಿಗೆ ಇನ್ನುಳಿದ 3 ಸೀಟುಗಳಲ್ಲಿ ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಹರಿಯಾಣ ಸರ್ಕಾರ ತಿಳಿಸಿದೆ. * ಕೇಂದ್ರ ಸರ್ಕಾರವು ಈ ಯೋಜನೆಯನ್ನು ಶೀಘ್ರದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ವಿಸ್ತರಿಸುವುದಾಗಿ ಚಿಂತನೆ ನಡೆಸಿದೆ.