Job Description: * ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ್ ಅರ್ಥ್ ಮೂವರ್ಸ್ ಕಂಪನಿಯು ಸ್ವದೇಸೀಯವಾಗಿ ನಿರ್ಮಿಸಿರುವ ಮೊದಲ ಚಾಲಕ ರಹಿತ ಮೆಟ್ರೊ ಬೋಗಿಗಳನ್ನು ಇತ್ತೀಚಿಗೆ ಬಿಡುಗಡೆ ಮಾಡಿದರು. * ಭಾರತ್ ಅರ್ಥ್ ಮೂವರ್ಸ್ ಕಂಪನಿಯು ತಯಾರಿಸಿರುವ ಚಾಲಕ ರಹಿತ ಮೆಟ್ರೊ ಬೋಗಿಗಳು 25 kv ವಿದ್ಯುತ್ ಬಳಸಿ ಸಂಚರಿಸುತ್ತವೆ, ಮತ್ತು ಈ ಬೋಗಿಗಳನ್ನು ಮುಂಬೈ ಮೆಟ್ರೊ ನಿಗಮಕ್ಕೆ ನೀಡಲಾಗುತ್ತದೆ. ಈ ಬೋಗಿಗಳಲ್ಲಿ ಸರಿ ಸುಮಾರು 2,280 ಜನರು ಪ್ರಯಾಣಿಸಬಹುದಾಗಿದೆ, ಜೊತೆಗೆ ಈ ಬೋಗಿಗಳಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಸೌಲಭ್ಯ ನೀಡಲಾಗಿದೆ.