Job Description: * ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ ರಾಜ್ಯದಲ್ಲಿನ ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಾಯಿ ಪಟೇಲ ಅವರ ಏಕತಾ ಪ್ರತಿಮೆಯಿಂದ ದೇಶದ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಒಟ್ಟು ಎಂಟು ರೈಲುಗಳಿಗೆ ಜನವರಿ 17 ರಂದು ವಿಡಿಯೋ ಕಾನ್ಫರೆನ್ಸ್ ಸಭೆಯ ಮೂಲಕ ಚಾಲನೆ ನೀಡಲಿದ್ದಾರೆ. ಸಭೆಯಲ್ಲಿ ಪ್ರಧಾನಿ ಮೋದಿ ಚಾಲನೆ ನೀಡುವ ರೈಲುಗಳ ವಿವರ ಇಂತಿವೆ : * ಕೆವಾಡಿಯಾ-ವಾರಣಾಸಿ ಮಹಾಮಣ ಎಕ್ಸ್ಪ್ರೆಸ್ ರೈಲು, ವಾರದಲ್ಲಿ 1ದಿನ ಮಾತ್ರ. * ದಾದರ್-ಕೆವಾಡಿಯಾ ಎಕ್ಸ್ಪ್ರೆಸ್ ದೈನಂದಿನ ರೈಲು. * ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಎಕ್ಸ್ಪ್ರೆಸ್ ದೈನಂದಿನ ರೈಲು. * ನಿಜಾಮುದ್ದೀನ್ - ಕೆವಾಡಿಯಾ ಎಕ್ಸ್ಪ್ರೆಸ್ ರೈಲು ವಾರದಲ್ಲಿ 2ದಿನ ಮಾತ್ರ. * ಕೆವಾಡಿಯಾ - ರೇವಾ ಎಕ್ಸ್ಪ್ರೆಸ್ ರೈಲು ವಾರದಲ್ಲಿ 1 ದಿನ ಮಾತ್ರ. * ಚೆನ್ನೈ - ಕೆವಾಡಿಯಾ ಎಕ್ಸ್ಪ್ರೆಸ್ ರೈಲು ವಾರದಲ್ಲಿ 1 ದಿನ ಮಾತ್ರ. * ಪ್ರತಾಪನಗರ-ಕೆವಾಡಿಯಾ ಎಂಇಎಂಯು ದೈನಂದಿನ ರೈಲು. * ಕೆವಾಡಿಯಾ-ಪ್ರತಾಪನಗರ ಎಂಇಎಂಯು ದೈನಂದಿನ ರೈಲುಗಳಿಗೆ ಪ್ರಧಾನಿ ಮೋದಿ ಅವರು ರವಿವಾರ ನಡೆಯುವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.