Job Description: * ಪ್ರಸ್ತುತ ಕರ್ನಾಟಕದ ರಾಜ್ಯದ ಕಾರವಾರದಲ್ಲಿ ಮೊದಲ ಶಿಪ್ಪಿಂಗ್ ಮತ್ತು ನೇವಿಗೇಶನ್ ಪರವಾನಗೆ ಕೇಂದ್ರ ಪ್ರಾರಂಭವಾಗಿದೆ. ಸೀ ಫೇರರ್ಸ್ ಸಂಸ್ಥೆಯು ಅಭ್ಯರ್ಥಿಗಳ ತರಬೇತಿ ಮತ್ತು ಕಲಿಕೆಯ ಅನುಭವವನ್ನು ಪರಿಗಣಿಸಿ ಲಿಖಿತ ಪರೀಕ್ಷೆ ಹಾಗೂ ಪ್ರಾಯೋಗಿಕ ಪರೀಕ್ಷೆ ನಡೆಸಿ ಕೇಂದ್ರವು ಪ್ರಮಾಣಪತ್ರವನ್ನು ನೀಡುತ್ತದೆ. * ಈ ಮೊದಲು ಅಭ್ಯರ್ಥಿಗಳ ಪರೀಕ್ಷೆ ಮತ್ತು ಪ್ರಮಾಣಪತ್ರವನ್ನು ಪಡೆಯಲು ಮಹಾರಾಷ್ಟ್ರ, ಕೇರಳಕ್ಕೆ ರಾಜ್ಯವನ್ನು ಅವಲಂಬಿಸಲಾಗಿತ್ತು. * ಶಿಪ್ಪಿಂಗ್ ಮತ್ತು ನೇವಿಗೇಶನ್ ಪರವಾನಗಿ ಕೇಂದ್ರದಿಂದ ಬಾರ್ಜ್, ಟಗ್ ಬೋಟ್ ನಡೆಸುವವರಿಗೆ ಮತ್ತು ಮಾಸ್ಟರ್ ಗ್ರೇಡ್ 1, ಗ್ರೇಡ್ 2, ಮತ್ತು 3, ಇಂಜಿನ್ ಡ್ರೖೆವರ್ ಇಂತಹ ಬೇರೆ ಬೇರೆ ಹುದ್ದೆಗಳಿಗೆ ಕಾರವಾರದಲ್ಲೇ ಪರವಾನಗಿ ಪತ್ರವನ್ನು ಈ ಕೇಂದ್ರವು ನೀಡಲಿದೆ. * ನೇವಿಗೇಶನ್ ಹಾಗೂ ಶಿಪ್ಪಿಂಗ್ ಸಂಬಂಧಪಟ್ಟ ಪರೀಕ್ಷೆ ನಡೆಸಿ ಪ್ರಮಾಣಪತ್ರವನ್ನು ನೀಡಲು ಕರ್ನಾಟಕ ರಾಜ್ಯದ ಬಂದರು ಇಲಾಖೆಯು, ಬೋರ್ಡ್ ಆಫ್ ಎಕ್ಸಾಮಿನೇಶನ್ ಫಾರ್ ಸೀ ಫೇರರ್ಸ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.