Job Description: * ಇತ್ತೀಚಿಗೆ ಕೊಲಾಬ್ಕ್ಯಾಡ್ ಸಾಫ್ಟ್ವೇರ್ ತಂತ್ರಜ್ಞಾನವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಜಂಟಿಯಾಗಿ ಪ್ರಾರಂಭಿಸಿವೆ. * ಕೊಲಾಬ್ಕ್ಯಾಡ್ ಸಾಫ್ಟ್ವೇರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, ಎಂಜಿನಿಯರಿಂಗ್ ಗ್ರಾಫಿಕ್ಸ್ ಅಧ್ಯಯನದ ಕ್ರಮವನ್ನು ಒದಗಿಸುತ್ತದೆ, ಹಾಗೂ ವಿದ್ಯಾರ್ಥಿಗಳಿಗೆ ಡಿಜಿಟಲ್ ವಿನ್ಯಾಸಗಳನ್ನು ರಚಿಸಲು ಉತ್ತಮ ವೇದಿಕೆಯನ್ನು ಕಲ್ಪಿಸುವ ಗುರಿಯನ್ನು ಕೊಲಾಬ್ಕ್ಯಾಡ್ ಸಾಫ್ಟ್ವೇರ್ ಹೊಂದಿದೆ. * ಕೊಲಾಬ್ಕ್ಯಾಡ್ ಸಾಫ್ಟ್ವೇರ್ ದೇಶದಲ್ಲಿರುವ ಅಟಲ್ ಟಿಂಕರಿಂಗ್ ಲ್ಯಾಬ್ಗಳ ವಿದ್ಯಾರ್ಥಿಗಳಿಗೆ 3D ವಿನ್ಯಾಸಗಳನ್ನು ರಚಿಸಲು ಒಂದು ಒಳ್ಳೆಯ ಕಲಿಕೆಯ ವೇದಿಕೆಯನ್ನು ಕಲ್ಪಿಸುವದು ಈ ಸಾಫ್ಟ್ವೇರ್ ನ ಮುಖ್ಯ ಉದ್ದೇಶವಾಗಿದೆ. * ಭಾರತದಲ್ಲಿನ 1 ಮಿಲಿಯನ್ ವಿದ್ಯಾರ್ಥಿಗಳನ್ನು ತಂತ್ರಜ್ಞರಾಗಿಸುವ ಗುರಿಯನ್ನು ಅಟಲ್ ಟಿಂಕರಿಂಗ್ ಲ್ಯಾಬ್ಸ್ ಹೊಂದಿದೆ. * ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) 100ಅಟಲ್ ಟಿಂಕರ್ ಲ್ಯಾಬ್ಗಳನ್ನು ಅಳವಡಿಸಿಕೊಂಡು ಮತ್ತು ಬಾಹ್ಯಾಕಾಶದ ಬಗ್ಗೆ ಹಾಗೂ ವಿಷಯ ತಂತ್ರಜ್ಞಾನಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡುತ್ತಿದೆ.