Job Description: * ಒಡಿಶಾ ರಾಜ್ಯದಲ್ಲಿ ಭಾರತದ ಮೊದಲ "ಫೈರ್ ಪಾರ್ಕ್" ಗೆ ಇತ್ತೀಚಿಗೆ ಚಾಲನೆ ನೀಡಲಾಯಿತು. ದೇಶದಲ್ಲಿ ಮೊದಲ ಬಾರಿಗೆ ಜನರಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಫೈರ್ ಪಾರ್ಕ್ ಅನ್ನು ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರವರು ಉದ್ಘಾಟನೆ ಮಾಡಿದರು. * ಈ ಫೈರ್ ಪಾರ್ಕ್ ಅನ್ನು ಒಡಿಶಾ ರಾಜ್ಯದ ಭುವನೇಶ್ವರದ ಒಡಿಶಾ ಅಗ್ನಿ ಶಾಮಕ ಮತ್ತು ವಿಪತ್ತು ಅಕಾಡೆಮಿಯ ಆವರಣದೊಳಗೆ ಸ್ಥಾಪಿಸಲಾಗಿದ್ದು, ಇದರಿಂದ ರಾಜ್ಯದ ಜನರಿಗೆ ಪ್ರಥಮ ಚಿಕಿತ್ಸೆ, ಅಗ್ನಿ ಶಾಮಕ ಉಪಕರಣಗಳ ಬಳಕೆ, ರಕ್ಷಣಾ ಮತ್ತು ವಿಪತ್ತು ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ತಿಳಿಯಲು ನೆರವಾಗಲು ಈ ಫೈರ್ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ. * ಫೈರ್ ಪಾರ್ಕ್ ಅನ್ನು ಪ್ರತಿ ಶನಿವಾರ ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಸಾಮಾನ್ಯ ಜನರ ವೀಕ್ಷೆಗಾಗಿ ತೆರದಿರಲಾಗುತ್ತದೆ ಎಂದು ತಿಳಿಸಿದೆ.