Job Description: * ವಿಶ್ವದ ಮೊದಲ ವಿದ್ಯುತ್ ಚಾಲಿತ ಡಬಲ್-ಸ್ಟ್ಯಾಕ್ ರೈಲಿಗೆ ಭಾರತದ ಪ್ರಧಾನಿ ಮೋದಿ ಇತ್ತೀಚಿಗೆ ಚಾಲನೆ ನೀಡಿದರು. ಈ ರೈಲು ನ್ಯೂ ಅಟೇಲಿ-ನ್ಯೂ ಕಿಶನ್ ಘರ್ ನಡುವೆ ಸಂಚರಿಸಲಿದೆ. ಮತ್ತು ಇದು ಒಟ್ಟು 1.5 ಕಿ.ಮೀ ಉದ್ದದ ಕಂಟೇನರ್ ಹೊಂದಿದೆ. * ಈ ರೈಲುಗಳ ಮೂಲಕ ಕಡಿಮೆ ಸ್ಥಳಾವಕಾಶದಲ್ಲಿ ದುಪ್ಪಟ್ಟು ಸರಕನ್ನು ಒಂದೇ ರೈಲಿನ ಮೂಲಕ ಸಾಗಿಸಬಹುದಾಗಿದ್ದು, ಇದರಿಂದ ಇಂಧನ ಮತ್ತು ಸಮಯದ ಉಳಿತಾಯವಾಗಲಿದೆ. * ಭಾರತದ ಹೊಸ ಅಭಿವೃದ್ಧಿಗೆ ಪೂರ್ವ ಮತ್ತು ಪಶ್ಚಿಮ ಸರಕು ಕಾರಿಡಾರ್ಗಳು ಸಹಾಯವಾಗಲಿವೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ, ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನಿರ್ಮಾಣದಲ್ಲಿ, ಜಪಾನ್ ದೇಶವು ಭಾರತಕ್ಕೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿದ್ದು, ಪ್ರಧಾನಿ ಮೋದಿಯವರು ಜಪಾನ್ ದೇಶದ ಜನರಿಗೆ ಅಭಿನಂಧನೆಗಳನ್ನು ತಿಳಿಸಿದರು.