Job Description: * ಭಾರತೀಯ ಮತ್ತು ಪಾಕಿಸ್ತಾನ ದೇಶಗಳು ಕೈದಿಗಳ ವಿವರವನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ. ಎರಡು ದೇಶಗಳು 21 ಮೇ 2008ರಲ್ಲಿ ಕೈದಿಗಳ ವಿವರವನ್ನು ವಿನಿಮಯ ಮಾಡಿಕೊಳ್ಳಲು ಮಾಡಿಕೊಂಡ ಒಪ್ಪಂದ ಅನುಸಾರ ಈ ವಿನಿಮಯ ನಡೆದಿದೆ. * ಈ ಒಪ್ಪಂದದ ಪ್ರಕಾರ ಪ್ರತಿ ವರ್ಷ ಜನೆವರಿ 1 ಮತ್ತು ಜುಲೈ 1ರಂದು ಕೈದಿಗಳ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ. * ಪಾಕಿಸ್ತಾನದ ಜೈಲುಗಳಲ್ಲಿರುವ 319 ಭಾರತೀಯ (49 ನಾಗರಿಕರು ಮತ್ತು 270 ಮೀನುಗಾರರು) ಕೈದಿಗಳ ಪಟ್ಟಿಯನ್ನು ಪಾಕಿಸ್ತಾನವು ಭಾರತದ ಹೈಕಮಿಷನ್ಗೆ ಸಲ್ಲಿಸಿದೆ. * ಭಾರತದ ಜೈಲುಗಳಲ್ಲಿರುವ 340 ಪಾಕಿಸ್ತಾನದ (263 ನಾಗರಿಕರು ಮತ್ತು 77 ಮೀನುಗಾರರು) ಕೈದಿಗಳ ಪಟ್ಟಿಯನ್ನು ಭಾರತವು ಪಾಕಿಸ್ತಾನಕ್ಕೆ ನೀಡಿದೆ.