Job Description: * ಇತೀಚಿಗೆ ಭಾರತೀಯ ನೌಕಾಪಡೆಗೆ 8ನೇ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ ನೌಕೆ ಸೇರ್ಪಡೆಗೊಂಡಿತು. ಈ ಯುದ್ಧನೌಕೆಯು ರಕ್ಷಣಾ ಕಾರ್ಯಾಚರಣೆ ನಡೆಸಲುಸಹಕರಿಸುವುದರ ಜೊತೆಗೆ ಇದರಿಂದ ನೌಕಾಪಡೆಗೆ ಬಲ ಹೆಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. * ಈ ನೌಕೆಯಲ್ಲಿನ ಶೇ 90ರಷ್ಟು ಬಿಡಿ ಭಾಗಗಳು ಭಾರತದಲ್ಲಿ ತಯಾರಿಸಲಾಗಿದೆ, ಮತ್ತು ಈ ನೌಕೆಯಲ್ಲಿ 216 ಜನ ಇರಲು ಸ್ಥಳಅವಕಾಶ ಕಲ್ಪಿಸಲಾಗಿದೆ. ಲ್ಯಾಂಡಿಂಗ್ ಕಾರ್ಯಾಚರಣೆ ಸಮಯದಲ್ಲಿ ರಕ್ಷಣೆಗೆ ಅನುಕೂಲವಾಗಲೆಂದು ಆತ್ಮ ನಿರ್ಬರ್ ಯೋಜನೆಯಡಿ ನಿರ್ಮಿತವಾದ ಎರಡು ಸಿಆರ್ಎನ್ 91 ಗನ್ಗಳನ್ನು ಈ ನೌಕೆಯಲ್ಲಿ ಅಳವಡಿಸಲಾಗಿದೆ. * ಸರ್ಕಾರಿ ರಕ್ಷಣಾ ವಲಯದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆಯಂಡ್ ಎಂಜಿನಿಯರ್ಸ್ ಭಾರತೀಯ ನೌಕಾಪಡೆಗೆ ಯುದ್ಧನೌಕೆಯಾದ 8ನೇ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ ನೌಕೆಯನ್ನು ನಿರ್ಮಿಸಿದೆ, ಮತ್ತು ಈ ಯುದ್ಧನೌಕೆಯನ್ನು ಅಂಡಮಾನ್ ನಿಕೊಬಾರ್ ದ್ವೀಪದಲ್ಲಿ ನಿಯೋಜನೆ ಮಾಡಲಾಗುವದು ಎಂದು ನೌಕಾಪಡೆ ಮಾಹಿತಿಯನ್ನು ನೀಡಿದೆ.