Job Description: * ನಿವೃತ್ತ ಅಧಿಕಾರಿ ಕರ್ನಲ್ ನರೇಂದ್ರ ಬುಲ್ ಕುಮಾರ್ ರವರು ಇತ್ತೀಚಿಗೆ ತಮ್ಮ 87ನೇ ವಯಸ್ಸಿನಲ್ಲಿ ವಿಧಿವಶರಾದರು. ಇವರು ಸಿಯಾಚಿನ್ ಹಿಮನದಿಯ ಸಮೀಕ್ಷೆ ನಡೆಸಿ ಭಾರತೀಯ ಸೈನ್ಯಕ್ಕೆ ಸಹಾಯವನ್ನು ಮಾಡಿದ್ದರು. * ಕರ್ನಲ್ ನರೇಂದ್ರ ಬುಲ್ ಕುಮಾರ್ ರವರು ಏಪ್ರಿಲ್ 13, 1984 ರಂದು ಸಿಯಾಚಿನ್ನ ಕಾರ್ಯತಂತ್ರದ ಮಾಹಿತಿಯನ್ನು ಪ್ರಧಾನಿ ಇಂದಿರಾ ಗಾಂಧಿಯವರಿಗೆ ನೀಡಿದ್ದರು, ಇದರಿಂದ ಪ್ರೇರಣೆಗೊಂಡ ಪ್ರಧಾನಿಯವರು, 'ಆಪರೇಷನ್ ಮೇಘದೂತ್' ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಸೈನ್ಯವನ್ನು ಸೋಲಿಸಿ ಸಿಯಾಚಿನ್ ಹಿಮನದಿಯನ್ನು ಭಾರತದ ವಶಕ್ಕೆ ಪಡೆದುಕೊಂಡರು.