Job Description: * ಕೇಂದ್ರದ ಮಾಜಿ ಗೃಹ ಸಚಿವ ಮತ್ತು ಮಾಜಿ ಸಂಸದರಾದ ಬುಟಾ ಸಿಂಗ್ ರವರು ತಮ್ಮ 86ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇವರು 21 ಮಾರ್ಚ್ 1934 ಪಂಜಾಬ್ ರಾಜ್ಯದ, ಜಲಂಧರ್ ಜಿಲ್ಲೆಯ, ಮುಸ್ತಫಾಪುರ ಎಂಬಲ್ಲಿ ಜನಿಸಿದ್ದರು. * ಬುಟಾ ಸಿಂಗ್ ರವರು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಾಗ ಇಂದಿರಾ ಗಾಂಧಿ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಾಂಗ್ರೆಸ್ ನಾಯಕ ಎಂದು ಗುರುತಿಸಿಕೊಂಡಿದ್ದರು, ಜೊತೆಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ನಾಯಕರಾಗಿದ್ದರು, ಮತ್ತು ಬಿಹಾರ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ ಅನುಭವವನ್ನು ಇವರು ಹೊಂದಿದ್ದರು.