Job Description: * ಚೀನಾ ದೇಶದ 66 ವಯಸ್ಸಿನ ಝಾಂಗ್ ಶಾನ್ಷನ್ ರವರು ಏಷ್ಯಾದ ನಂಬರ್ 1 ಶ್ರೀಮಂತ ವ್ಯಕ್ತಿಯಾಗಿದ್ದಾರೆ, ಎಂದು ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಟಿಸಿದೆ. * ಇತೀಚಿನ ದಿನಗಳಲ್ಲಿ ಅತಿ ಹೆಚ್ಚು ಸಮಯದವರೆಗೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ, ಏಷ್ಯಾದ ಬಹುದೊಡ್ಡ ಉದ್ಯಮಿಯಾದ ಝಾಂಗ್ ಶಾನ್ಷನ್ ಪ್ರಥಮ ಸ್ಥಾನ ಪಡೆದುಕೊಂಡು, ಈಗ ಇವರು ವಿಶ್ವದ 11ನೇ ಅತಿದೊಡ್ಡ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. * ಪ್ರಸ್ತುತ ಝಾಂಗ್ ರವರು ಪತ್ರಿಕೋದ್ಯಮ, ಅಣಬೆ ಕೃಷಿ ಮತ್ತು ಹೆಲ್ತ್ ಕೇರ್ ಉತ್ಪನ್ನಗಳ ಉದ್ಯಮಿಯಾಗಿದ್ದಾರೆ. ಈ ವರ್ಷದ ಲಾಭವು 70.9 ಬಿಲಿಯನ್ ಡಾಲರ್ ನಿಂದ 77.8 ಬಿಲಿಯನ್ ಡಾಲರ್ಗೆ ಏರಿಕೆ ಕಂಡಿದೆ, ಹಾಗೂ ಇವರಿಗೆ ಸ್ಥಳೀಯವಾಗಿ ಲೋನ್ ವುಲ್ಫ್ ಎಂಬ ಹೆಸರಿನಿಂದ ಕರಿಯಲಾಗುತ್ತದೆ.