Job Description: * ಇತ್ತೀಚೆಗೆ ಪ್ರಧಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಆಂಧ್ರಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದ ಕೈಗಾರಿಕಾ ಪ್ರದೇಶಗಳು ಮತ್ತು ಲಾಜಿಸ್ಟಿಕ್ಸ್ ಹಬ್ಗೆ ಅನುಮೋದನೆ ನೀಡಲಾಯಿತು. * ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಪ್ರದೇಶವು ಕೈಗಾರಿಕೀಕರಣ ಮಾಡುವದರಿಂದ ಜನರಿಗೆ ಉದ್ಯೋಗವನ್ನುಒದಗಿಸಲಿದೆ. ಈ ಕೈಗಾರಿಕಾ ಪ್ರದೇಶವು 2,139.44 ಕೋಟಿ ರೂ. ಅಂದಾಜು ವೆಚ್ಚದಲ್ಲಿ ತಯಾರಾಗಲಿದೆ. * ಕರ್ನಾಟಕದ ತುಮಕೂರು ಪ್ರದೇಶವು ಕೈಗಾರಿಕೀಕರಣದಿಂದ ಉದ್ಯೋಗ ನೀಡಲಿದ್ದು, ಈ ಕೈಗಾರಿಕಾ ಪ್ರದೇಶವು 1,701.81 ಕೋಟಿ ರೂ. ಅಂದಾಜು ವೆಚ್ಚದಲ್ಲಿ ತಯಾರಾಗಲಿದೆ. * ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ, ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಹಬ್ ಮತ್ತು ಮಲ್ಟಿ-ಮೋಡಲ್ ಟ್ರಾನ್ಸ್ಪೋರ್ಟ್ ಹಬ್ 3,883.8 ಕೋಟಿ ರೂ. ವೆಚ್ಚದಲ್ಲಿ ತಯಾರಾಗಲಿದೆ ಎಂದು ಕೇಂದ್ರ ಸಚಿವ ಸಂಪುಟ ತಿಳಿಸಿದೆ.