Job Description: * ಬಾಹ್ಯಾಕಾಶವನ್ನು ಶಾಂತಿಯುತವಾಗಿ ಬಳಸುವ ಕುರಿತ ಒಪ್ಪಂದಕ್ಕೆ 19 ನವೆಂಬರ್ 2020 ರಂದು ಭಾರತ ಮತ್ತು ಭೂತಾನ್ ಎರಡು ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ, ಎಂದು ಕೇಂದ್ರ ಸಚಿವ ಸಂಪುಟ ತಿಳಿಸಿದೆ. * ಈ ಬಾಹ್ಯಾಕಾಶ ಒಪ್ಪಂದದಿಂದ ಉಪಗ್ರಹ ಸಂಚರಣೆ ಮತ್ತು ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಅನ್ವೇಷಿಸಲು ಅವಕಾಶಗಳು ಸಿಗುತ್ತವೆ ಮತ್ತು ದೇಶಗಳ ನಡುವೆ ಬಾಹ್ಯಾಕಾಶ ಬಳಕೆಯನ್ನು ನಿರ್ಧರಿಸಲು ಅನುಕೂಲವಾಗುತ್ತದೆ ಎಂದು ಎರಡು ದೇಶಗಳು ತಿಳಿಸಿವೆ. * ಈ ಬಾಹ್ಯಾಕಾಶ ಬಳಕೆಯ ಒಪ್ಪಂದವು ಚಂದ್ರ ಮತ್ತು ಬೇರೆ ಆಕಾಶಕಾಯಗಳ ಬಳಕೆಯನ್ನು ಶಾಂತಿಯುತ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳಬಹುದಾಗಿದೆ, ಹಾಗೂ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ಇಡುವುದನ್ನು ಈ ಒಪ್ಪಂದ ನಿಷೇಧ ಮಾಡಿದೆ.