Job Description: * ದಕ್ಷಿಣ ಯೆಮನ್ ನಗರದ ಏಡೆನ್ ವಿಮಾನ ನಿಲ್ದಾಣದಲ್ಲಿ ಭಾರಿ ಸ್ಫೋಟ ಸಂಭವಿಸಿರುವುದಾಗಿ ಇಲ್ಲಿನ ಭದ್ರತಾ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಈ ಸ್ಫೋಟದಲ್ಲಿ ಪ್ರಸ್ತುತ 25 ಜನರು ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚವ ಸಾಧ್ಯತೆಯಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಮತ್ತು 110 ಮಂದಿ ಗಾಯಾಳುಗಳಾಗಿದ್ದಾರೆ. * ಇರಾನ್ ಬೆಂಬಲಿತ ಹೌತಿ ಬಂಡುಕೋರರು ಯೆಮನ್ ವಿಮಾನ ನಿಲ್ದಾಣದಲ್ಲಿ 4 ಕ್ಷಿಪಣಿಗಳನ್ನು ಸಿಡಿಸಿ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಯೆಮನ್ನ ಸರ್ಕಾರ ಹೇಳಿದೆ.