Job Description: * ಇತ್ತೀಚೆಗೆ ಕೇಂದ್ರದ ಭೂ ವಿಜ್ಞಾನ ಸಚಿವ ಡಾ.ಹರ್ಷ್ ವರ್ಧನ್ ಅವರು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿ ಹವಾಮಾನ ಕೇಂದ್ರವನ್ನು ಉದ್ಘಾಟಣೆ ಮಾಡಿದರು. ಇದು ಲಡಾಖ್ನ ಮೊದಲ ಹವಾಮಾನ ಕೇಂದ್ರವಾಗಿದ್ದು, ಈ ಹವಾಮಾನ ಕೇಂದ್ರದಿಂದ ಸುತ್ತಮುತ್ತಲಿನ ಪ್ರದೇಶದ ಹವಾಮಾನ ಮುನ್ಸೂಚನೆಯನ್ನು ಪಡೆಯಲು ಸಹಾಯವಾಗಲಿದೆ. * ಭಾರತದ ಅತಿ ಎತ್ತರದ ಹವಾಮಾನ ಕೇಂದ್ರ ಇದಾಗಿದ್ದು, ಇದು ಸುಮಾರು 3,500 ಮೀಟರ್ ಎತ್ತರದ ಪ್ರದೇಶದಲ್ಲಿದೆ. * ಈ ಹವಾಮಾನ ಕೇಂದ್ರವು ಕಾರ್ಗಿಲ್ ಮತ್ತು ಲೇಹ್ನಂತಹ ಜಿಲ್ಲೆಗಳಿಗೆ ಹವಾಮಾನ ಮುನ್ಸೂಚನೆಯನ್ನು ಒದಗಿಸುತ್ತದೆ. ಜೊತೆಗೆ ಪ್ರವಾಸಿ ಸ್ಥಳಗಳಾದ ನುಬ್ರಾ, ಡ್ರಾಸ್, ಪಾಂಗೊಂಗ್ ಸರೋವರ, ಖಾಲ್ಸಿ, ಪ್ರದೇಶಗಳ ಹವಾಮಾನ ಮುನ್ಸೂಚನೆಯನ್ನು ಪಡೆಯಲು ಅನುಕೂಲವಾಗಿದೆ. * ಪ್ರಸ್ತುತ ಭಾರತೀಯ 6 ಪ್ರಾದೇಶಿಕ ಹವಾಮಾನ ಕೇಂದ್ರಗಳು ಕೋಲ್ಕತಾ, ಗುವಾಹಟಿ, ಮುಂಬೈ, ಚೆನ್ನೈ ಮತ್ತು ನವದೆಹಲಿ, ಹಾಗೂ ನಾಗ್ಪುರದಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.