Job Description: * ದೇಶದ ಮೊತ್ತ ಮೊದಲ ಪರಾಗಸ್ಪರ್ಶಕ ಪಾರ್ಕ್ ಅನ್ನು ಇತ್ತೀಚಿಗೆ ಉತ್ತರಾಖಂಡ ರಾಜ್ಯದ ಹಲ್ದವಾನಿ ಎಂಬಲ್ಲಿ 4 ಎಕರೆ ವಿಸ್ತೀರ್ಣದ ಜಾಗದಲ್ಲಿ ಚಿಟ್ಟೆತಜ್ಞ ಪೀಟರ್ ಸ್ಮೆಟಾಸೆಕ್ ಅವರು ಉದ್ಘಾಟಣೆ ಮಾಡಿದರು. * ಈ ಪಾರ್ಕ್ ನಲ್ಲಿ 40ಕ್ಕೂ ಅಧಿಕ ಜಾತಿಗಳ ಚಿಟ್ಟೆಗಳು, ಜೇನ್ನೊಣಗಳು, ಪಕ್ಷಿಗಳು ಮತ್ತು ಕೀಟಗಳಿಂದ ಕೂಡಿದ ಪಾರ್ಕ್ ತಯಾರಾಗಿದೆ, ಮತ್ತು ಇದು ದೇಶದ ಮೊದಲ ಪರಾಗಸ್ಪರ್ಶಕ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. * ಬೇರೆ ಬೇರೆ ಜಾತಿಯ ಪರಾಗಸ್ಪರ್ಶಕ ಜೀವಿಗಳ ಸಂರಕ್ಷಣೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಮುಖ್ಯ ಉದ್ದೇಶ ಈ ಪಾರ್ಕ್ ಹೊಂದಿರುವುದಾಗಿ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜೀವ ಚತುರ್ವೇದಿ ಅವರು ಮಾಹಿತಿ ನೀಡಿದ್ದಾರೆ.