Job Description: * ಲವ್ ಜಿಹಾದ್ ವಿರೋಧಿ ಮಸೂದೆಗೆ ಮಧ್ಯಪ್ರದೇಶದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ, ಮತ್ತು ಕಾನೂನು ನಿಯಮ ಪಾಲಿಸದವರಿಗೆ ಜೈಲುಶಿಕ್ಷೆ ನೀಡಲಾಗುವದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರು ತಿಳಿಸಿದ್ದಾರೆ. * 2020ರ ಧಾರ್ಮಿಕ ಸ್ವಾತಂತ್ರ್ಯ ಮಸೂದೆ ಅನ್ವಯ ಪ್ರಕಾರ ಮಧ್ಯಪ್ರದೇಶದ ಹಿಂದುಳಿದ ಮಹಿಳೆ ಹಾಗೂ ಪುರುಷರನ್ನು ಬಲವಂತವಾಗಿ ಮತಾಂತರ ಮಾಡಿದಲ್ಲಿ ಈ ಹೊಸ ಮಸೂದೆ ಪ್ರಕಾರ ಜೈಲುಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಮಧ್ಯಪ್ರದೇಶದ ಗೃಹ ಮಂತ್ರಿಯಾದ ನರೋತ್ತಮ್ ಮಿಶ್ರಾ ರವರು ತಿಳಿಸಿದ್ದಾರೆ. * ಪ್ರಸ್ತುತ ಮಧ್ಯಪ್ರದೇಶವು ಲವ್ ಜಿಹಾದ್ ಮಸೂದೆಯನ್ನು ಜಾರಿಗೆ ತಂದ 3ನೇ ರಾಜ್ಯವಾಗಿದೆ, ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಉತ್ತರಪ್ರದೇಶ ಮತ್ತು ಹಿಮಾಚಲ್ ಪ್ರದೇಶ ರಾಜ್ಯಗಳಿವೆ.