Job Description: ಆರ್ ಕ್ಲಸ್ಟರ್ ಏಷ್ಯಾದ ಆಳವಾದ ಆಫ್-ಶೋರ್ ಅನಿಲ ಉತ್ಪಾದನೆಯ ಕ್ಷೇತ್ರವಾಗಿದ್ದು, ಬ್ರಿಟಿಷ್ ಪೆಟ್ರೋಲಿಯಂ ಜೊತೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಂದು ಗೂಡಿ ಅನಿಲ ಉತ್ಪಾದನೆಯನ್ನು ಪ್ರಾರಂಭಿಸುವುದಾಗಿ ಈ ಯೋಜನೆಯನ್ನು ಘೋಷಣೆ ಮಾಡಿವೆ. ಅದರ ಜೊತೆಗೆ ಮೂರು ಕ್ಷೇತ್ರಗಳಲ್ಲಿ 40,000 ಕೋಟಿ ರೂ ಹೂಡಿಕೆಯನ್ನು ಮಾಡಿವೆ. 2021-22ರಲ್ಲಿ ಉಪಗ್ರಹ ಕ್ಲಸ್ಟರ್ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಮಾಹಿತಿಯನ್ನು ನೀಡಿವೆ. ಈ ಯೋಜನೆಇಂದ ಭಾರತದ ಇಂಧನ ಬುಟ್ಟಿಯಲ್ಲಿನ ನೈಸರ್ಗಿಕ ಅನಿಲದ ಪಾಲು ಈಗ 6.2% ರಷ್ಟಿದೆ ಹಾಗೂ 2030 ರಲ್ಲಿ15% ಕ್ಕೆ ಹೆಚ್ಚಿಸಲಾಗುತ್ತದೆ. ಜೊತೆಗೆ ಭಾರತದ ಅನಿಲ ಆಮದಿನ ಅವಲಂಬನೆಯನ್ನು ಕಡಿಮೆಗೊಳ್ಳಲಿದೆ.