Job Description: ಭಾರತ ಸರ್ಕಾರವು 2001 ರಿಂದ ರೈತ ದಿನಾಚರಣೆಯನ್ನು ಆಚರಿಸಲು ಆರಂಭಿಸಿತು. ಪ್ರತಿ ವರ್ಷವು ಡಿಸೆಂಬರ್ 23 ರಂದು ಕಿಸಾನ್ ದಿವಾಸ್ ವನ್ನು ಆಚರಣೆ ಮಾಡಲಾಗುತ್ತಿದ್ದು, ಈ ದಿನಾಂಕದಂದು ಭಾರತದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾಗಿದ್ದು, ಅವರನ್ನು ಗೌರವಿಸಲು ಕಿಸಾನ್ ದಿವಸ್ ಆಚರಣೆ ಮಾಡಲಾಗುತ್ತದೆ. ಕಿಸಾನ್ ದಿನವನ್ನು ರೈತ ದಿನ ಎಂದೂ ಕರೆಯುತ್ತಾರೆ. * ಚೌಧರಿ ಚರಣ್ ಸಿಂಗ್ ಅವರು 1978 ರಲ್ಲಿ ಕಿಸಾನ್ ಟ್ರಸ್ಟ್ ಅನ್ನು ಪ್ರಾರಂಭಿಸಿದರು. ಜೊತೆಗೆ ರೈತರ ಕಲ್ಯಾಣಕ್ಕಾಗಿ ಅನೇಕ ಕೊಡುಗೆಗಳನ್ನು ನೀಡಿದರು. ಚೌಧರಿ ಚರಣ್ ಸಿಂಗ್ ಅವರ ಸ್ಮಾರಕವನ್ನು ದೆಹಲಿಯಲ್ಲಿ 'ಕಿಸಾನ್ ಘಾಟ್' ಎಂದು ಕರೆಯುತ್ತಾರೆ. * ಚರಣ್ ಸಿಂಗ್ ರವರು ಸಾಲ ವಿಮೋಚನಾ ಮಸೂದೆಯನ್ನು 1939 ರಲ್ಲಿ ಮಂಡಿಸಿದರು. * ಭಾರತದ ಜಮೀನ್ದಾರಿ ಪದ್ದತಿಯನ್ನು 1952 ರಲ್ಲಿ ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.