Job Description: ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮೆರಿಕದ ಪ್ರತಿಷ್ಥಿತ 'ಲೀಜನ್ ಆಫ್ ಮೆರಿಟ್' ಪ್ರಶಸ್ತಿಯನ್ನು ಅಮೆರಿಕದಲ್ಲಿನ ಶ್ವೇತಭವನದಲ್ಲಿ ಇತ್ತೀಚಿಗೆ ಪ್ರಧಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಭಾರತದ ರಾಯಭಾರಿ ತರನ್ಜಿತ್ ಸಿಂಗ್ ಸಂಧುರವರು ಪ್ರಧಾನಿಯವರ ಪರವಾಗಿ ಸ್ವೀಕರಿಸಿದರು. ರಾಷ್ಟ್ರದ ಪ್ರಧಾನಿ ಅಥವಾ ಅಗ್ರನಾಯಕನಿಗೆ ಮಾತ್ರ ಈ ಅತ್ಯುನ್ನತ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರವರು ಪ್ರಧಾನಿ ಮೋದಿಯವರಿಗೆ ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸುವಲ್ಲಿ ಹಾಗೂ ಅಮೆರಿಕದೊಂದಿಗಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಇಲ್ಲಿಯವರೆಗೆ ಪ್ರಧಾನಿ ಮೋದಿ ಅವರಿಗೆ ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ನೀಡಿದ ವಿವಿಧ ದೇಶಗಳು: * ಸೌದಿ ಅರೇಬಿಯಾದ "ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್" ಮತ್ತು "ಘಾಜಿ ಅಮಿರ್ ಅಮಾನುಲ್ಲಾಖಾನ್" ಪ್ರಶಸ್ತಿಯನ್ನು 2016ರಲ್ಲಿ ಪ್ರದಾನ ಮಾಡಲಾಗಿದೆ. * "ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪಾಲೆಸ್ಡೈನ್" ಅವಾರ್ಡ್ ಪ್ರಶಸ್ತಿಯನ್ನು 2018ರಲ್ಲಿ ಪ್ರದಾನ ಮಾಡಲಾಗಿದೆ. * "ಆರ್ಡರ್ ಆಫ್ ಝಾಯೇದ್ ಅವಾರ್ಡ್" ಪ್ರಶಸ್ತಿಯನ್ನು ಯುಎಇ ನೀಡಿದೆ. * "ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ" ಪ್ರಶಸ್ತಿಯನ್ನು ರಷ್ಯಾ ನೀಡಿದೆ. * "ಆರ್ಡರ್ ಆಫ್ ದಿ ಡಿಸ್ಟಿಂಗ್ವಿಷ್ಡ್ ರೂಪ್ ಆಫ್ ನಿಶಾನ್ ಇಜುದ್ದೀನ್" ಪ್ರಶಸ್ತಿಯನ್ನು ಮಾಲ್ಡೀವ್ಸ್ ನೀಡಿದೆ.