Job Description: * ಉತ್ತರ ಪ್ರದೇಶ ರಾಜ್ಯವು ಸುಮಾರು 22,800 ಕೋಟಿ ರೂ. ಮೊತ್ತದ ಸಾಲವನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಘಟಕಗಳು ತಮ್ಮ ವ್ಯವಹಾರವನ್ನು ಹೆಚ್ಚಿಸಲು MSME ಮುಖಾಂತರ ಸಾಲ ಕೊಡುವದರಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದಿದೆ. * ಉತ್ತರ ಪ್ರದೇಶ ಸರ್ಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಒಟ್ಟು 3,54,825 MSME ಘಟಕಗಳಿಗೆ ಅಂದಾಜು 10,390 ಕೋಟಿ ರೂ. ಸಾಲವನ್ನು ನೀಡಿದ್ದಾರೆ. * ಬ್ಯಾಂಕ್ನಿಂದ 2.05 ಲಕ್ಷ ಕೋಟಿ ಸಾಲ MSME ವಲಯಕ್ಕೆ ಮಂಜೂರಾಗಿದ್ದು, MSME ಗಳ ಮುಖಾಂತರ 11 ರಾಜ್ಯಗಳಿಗೆ ಅತಿ ಹೆಚ್ಚು ಸಾಲವನ್ನು ನೀಡಲಾಗಿದೆ. ಉತ್ತರ ಪ್ರದೇಶ ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳು ಒಳಗೊಂಡಿದೆ.