Job Description: ಇದೆ ಡಿಸೆಂಬರ್ 21ರಂದು ಸಂಜೆ ಆಕಾಶದಲ್ಲಿ ಗುರು ಮತ್ತು ಶನಿ ಗ್ರಹಗಳ ಜೋಡಿಯ ಅಪರೂಪದ ವಿದ್ಯಮಾನವೊಂದು ಕಂಡಿದೆ. ಕಳೆದ 20 ವರ್ಷಗಳ ಬಳಿಕ ಗುರು ಮತ್ತು ಶನಿ ಗ್ರಹಗಳು ಅತ್ಯಂತ ಸಮೀಪದಲ್ಲಿ ಘೋಚರಿಸಿದ್ದು, ಈ ವಿದ್ಯಾಮಾನವು 800 ವರ್ಷಗಳ ಬಳಿಕ ಅತ್ಯಂತ ಸಮೀಪದಲ್ಲಿ ಗೋಚರಿಸುತ್ತಿರುವುದಾಗಿ ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಈ ವಿದ್ಯಮಾನವನ್ನು 'ಗ್ರೇಟ್ ಕಂಜಂಕ್ಷನ್' ಎಂದು ಕರಿಯಲಾಗುತ್ತದೆ. * ಗುರುಗ್ರಹವು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷಗಳು ಬೇಕು. ಮತ್ತು ಶನಿಗ್ರಹವು ಪರಿಭ್ರಮಿಸಲು 29.46 ವರ್ಷಗಳನ್ನು ಕಾಲ ಬೇಕಾಗುತ್ತದೆ. ಗುರು-ಶನಿ ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಕಾಲ ಬೇಕಾಗುತ್ತದೆ. ಆದ್ದರಿಂದ ಇದನ್ನು ಗ್ರಹಗಳ ಸಮಾಗಮ ಎನ್ನುತ್ತಾರೆ. * ಈ ಗುರು-ಶನಿ ಗ್ರಹಗಳ ಸಾಯಂಕಾಲ 6.15 ರಿಂದ ರಾತ್ರಿ 8 ಗಂಟೆ ತನಕ, ಅಂದರೆ ಕೇವಲ 1 ಗಂಟೆ 45 ನಿಮಿಷ ಮಾತ್ರ ವೀಕ್ಷಣೆ ಮಾಡಲು ಸಿಗುತ್ತವೆ.