Job Description: ಕೇಂದ್ರ ಕ್ರೀಡಾ ಸಚಿವಾಲಯ 2021ರ ವರ್ಷದ ಹರಿಯಾಣದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ಗೇಮ್ಸ್ನಲ್ಲಿ ಸ್ಥಳೀಯ ಕ್ರೀಡೆಗಳಿಗೆ ಭಾಗವಹಿಸಲು ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಮಲ್ಲಕಂಬ ಮತ್ತು ಕೇರಳ ಮೂಲದ ಕಳರಿ ಪಯಟ್ಟು ಹಾಗೂ ಪಂಜಾಬ್ ಮೂಲದ ಯುದ್ಧ ಕೌಶಲ್ಯವನ್ನು ಒಳಗೊಂಡಿರುವ ಗಾಟ್ಕಾ ಎಂಬ ಸ್ಥಳೀಯ ಕ್ರೀಡೆಗಳಿಗೆ ಒಳಪಡಿಸಲು ಅನುಮತಿಯನ್ನು ನೀಡಲಾಗಿದೆ. * ಕ್ರೀಡಾ ಇಲಾಖೆ ತೆಗೆದುಕೊಂಡ ಈ ನಿರ್ಧಾರದಿಂದ ಭಾರತದ ಸ್ಥಳೀಯ ಕ್ರೀಡೆಗಳ ಸಮೃದ್ಧವಾದ ಸಂಸ್ಕೃತಿಯನ್ನು ಮತ್ತು ಪ್ರೋತ್ಸಾಹವನ್ನು ನೀಡಲು ಕ್ರೀಡಾ ಇಲಾಖೆಯ ಸಿದ್ದವಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ರವರು ತಿಳಿಸಿದ್ದಾರೆ.