Job Description: ಇತ್ತೀಚೆಗೆ ಭಾರತದ ಹೈದರಾಬಾದ್ನಲ್ಲಿ ಹೈಪರ್ಸಾನಿಕ್ ವಿಂಡ್ ಟನಲ್ ಪರೀಕ್ಷಾ ಸೌಲಭ್ಯವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಣೆ ಮಾಡಿದರು. ಈ ಹೈಪರ್ಸೋನಿಕ್ ವಿಂಡ್ ಟನಲ್ ಟೆಸ್ಟ್ ಸೌಲಭ್ಯವನ್ನು ಆರಂಭಿಸಿದ ಮೂರನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿತು, ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾ ದೇಶಗಳಿವೆ. ಈ ಹೈಪರ್ಸಾನಿಕ್ ವಿಂಡ್ ಟನಲ್ ಟೆಸ್ಟ್ ಸೌಲಭ್ಯ ಭವಿಷ್ಯದ ಏರೋಸ್ಪೇಸ್ ಮತ್ತು ರಕ್ಷಣಾ ವ್ಯವಸ್ಥೆಯನ್ನು ತಿಳಿದುಕೊಳ್ಳುವದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ.