Job Description: ಇತ್ತೀಚಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಡಿಯೋ ಕಾನ್ಫೆರನ್ಸ್ ಮೂಲಕ ಕರ್ನಾಟಕ ರಾಜ್ಯದ 33 ಬೃಹತ್ ಹೆದ್ದಾರಿ ಕಾಮಾಗಾರಿಗಳಿಗೆ ಚಾಲನೆ ನೀಡಿದರು. ಈ ಕಾಮಗಾರಿಯು ಸುಮಾರು 10,904 ಕೋಟಿ ರೂ. ವೆಚ್ಚದ 1,197 ಕಿ.ಮೀ ಉದ್ದದ ಹೆದ್ದಾರಿ ರಸ್ತೆ ನಿರ್ಮಾಣ ಯೋಜನೆಯಾಗಿದೆ. * ಪ್ರಮುಖವಾಗಿ ರಾ.ಹೆ.-75ರ ಶಿರಾಡಿ, ರಾ.ಹೆ. 73ರ ಚಾರ್ಮಾಡಿ ಮತ್ತು ರಾ.ಹೆ. 275ರ ಸಂಪಾಜೆ ಘಾಟಿಯ ಪ್ರದೇಶಗಳನ್ನು ಈ ಯೋಜನೆ ಒಳಗೊಂಡಿದೆ. * ಕಳೆದ 6 ವರ್ಷಗಳಲ್ಲಿ ಕರ್ನಾಟಕದ ಸುಮಾರು 900 ಕಿ.ಮೀ ಹೆದ್ದಾರಿ ಕಾಮಗಾರಿ ಹೆಚ್ಚುವರಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಒಟ್ಟು ಹೆದ್ದಾರಿ ಕಾಮಗಾರಿ 7652 ಕಿ.ಮೀಗೆ ಏರಿಕೆಯಾಗಿದೆ.